ಸೋಮದೇವನ 'ಕಥಾಸರಿತ್ಸಾಗರ' ಸಂಸ್ಕೃತದಲ್ಲಿರುವ ಒಂದು ದೊಡ್ಡ ಕಾವ್ಯ. ಪ್ರಪಂಚದ ಹಿರಿಯ ಭಾಷೆಗಳಿಗೆಲ್ಲಾ ಭಾಷಾಂತರವಾಗಿ ಕಥಾಶಾಸ್ತ್ರ ವ್ಯಾಸಂಗಕ್ಕೆ ಸಾಧನವಾಗಿರುವ ಕಾವ್ಯ. ಕಥೆಗಳೆಂಬ ನದಿಗಳು ಬಂದು ಸೇರಿ ಆಗಿರುವ ಸಾಗರವೇ 'ಕಥಾಸರಿತ್ಸಾಗರ'. 'ಕಥಾಮೃತ' ಅದರ ಸಂಗ್ರಹರೂಪ. 'ಕಥಾಮೃತ'ದಲ್ಲಿ ಬೇಕಾದಷ್ಟು ಕಥೆಗಳಿವೆ; ಎಲ್ಲ ವಯಸ್ಸಿನ, ಎಲ್ಲ ಸಂಸ್ಕಾರಗಳ, ಎಲ್ಲ ರುಚಿಗಳ ಜನರಿಗೂ ಪ್ರಿಯವಾಗುವ, ಹಿತವಾಗುವ ಕಥೆಗಳಿವೆ. ಇದು ಪ್ರಾಚೀನ ಭರತಖಂಡದ ಅತ್ಯುತ್ತಮ ಕಥೆಗಳ - ನೂರಾರು ಕಥೆಗಳ - ಭಂಡಾರ.
ಕಥಾಮೃತ / Kathamrita
ISBN: 9388114809
ISBN 13: 9789388114806
Publication Date: 2019
Publisher: Sriranga Digital Software Technologies Pvt. Ltd.
Pages: 424
Format: Paperback
Authors: A.R. Krishnashastri, ಎ.ಆರ್.ಕೃಷ್ಣಶಾಸ್ತ್ರಿ